ಪೀಠದ ಮೂಲ ಉದ್ದೇಶ
ಇಂದಿನ ಆಧುನಿಕ ತಂತ್ರಜ್ನಾನದ ಜೀವನ ಶೈಲಿಯಿಂದ ಸೋಮಾರಿಗಳಾಗಿ ಸಂಸ್ಕಾರಗಳನ್ನು ಮರೆತು,ಆತ್ಮವಿಶ್ವಾಸ ಕಳೆದುಕೊಂಡು ಅರ್ಥಹೀನ ಜೀವನ ಮಾಡುತ್ತಿರುವ ವಿದ್ಯಾರ್ಥಿ ವೃಂದದವರಿಗೆ ಮಾರ್ಗದರ್ಶನ ಮಾಡಿ ಸುಭ್ರದ್ರ ಹಾಗೂ ಉಜ್ವಲ ಜೀವನಕ್ಕೆ ನಾಂದಿ ಹಾಡುವುದರ ಜೊತೆಗೆ ಹೊಸ ಆಯಾಮಗಳನ್ನು ನೀಡುವ ಪ್ರಯತ್ನ ಸಮಾಜದ ಭವಿಷ್ಯದ ವಿಧಿಯಾದ ವಿದ್ಯಾರ್ಥಿಗಳು ಸ್ವಾರ್ಥಿಗಳಾಗಿ, ಮಾನಸಿಕವಾಗಿ, ದೈಹಿಕವಾಗಿ ಹಾಗು ಆಧ್ಯಾತ್ಮಿಕವಾಗಿ ದುರ್ಬಲರಾಗಿದ್ದಾರೆ. ಪುಸ್ತಕ ,ಪೆನ್ನು ಹಿಡಿಯುವ ಕೈಗಳಲ್ಲಿ ಲವ್ಲೆಟರ್, ಲಾಂಗು, ಮಾದಕ ದ್ರವ್ಯಗಳ ಒಡನಾಟದ ನರಕದಲ್ಲಿ ನರಳುತ್ತಿದ್ದಾರೆ. ಇದಲ್ಲದೆ "ಆತ್ಮಹತ್ಯೆ" ಎಂಬ ಘೋರ ಪಾಪಕೂಪದಲ್ಲಿ ಒದ್ದಾಡುತ್ತಿರುವುದನ್ನು ಗಮನಿಸುತ್ತಿರುವ ಗುರೂಜಿಯವರು "ವಿದ್ಯಾರ್ಥಿಗಳ ಹಾಗೂ ಅಸಹಾಯ ಪೋಷಕರಿಗಾಗಿ ಈ ವಿಶೇಷ ಕಾರ್ಯಕ್ರಮವನ್ನು ಮಾಡಲು ತೀರ್ಮಾನಿಸಿ, ಎಲ್ಲಾ ವಿದ್ಯಾರ್ಥಿ ಪೋಷಕರ ವೃಂದವನ್ನು ತಲುಪುವ ಪ್ರತಿಕ್ರಿಯೆಯಲ್ಲಿ ತೊಡಗಿಸಿಕೊಂಡು ಈ ಕೆಳಗಿನ ಅಂಶಗಳಿಗೆ ಪ್ರಾಮುಖ್ಯತೆಯನ್ನು ನೀಡುವ ನಿಟ್ಟಿನಲ್ಲಿ ಸಾಗಬಯಸುವುದೇ ಈ ಕಾರ್ಯಕ್ರಮದ ಮಹದುದ್ದೇಶವಾಗಿರುತ್ತದೆ.